Kuntha Janagale (song)

Revision as of 08:51, 13 January 2026 by Akshay (talk | contribs) (add lyrics from Gopal Dabade)
(diff) ← Older revision | Latest revision (diff) | Newer revision → (diff)

ಕುಂತ ಜನಗಳೇ

ಕುಂತ ಜನಗಳೇ ನಿಂತ ಮನಗಳೇ, ಕೇಳಿರಿ ಕಥೆಯನ್ನ , ನಾವು ಹೇಳುವ ಕಥೆಯನ್ನ , ಆರೋಗ್ಯವು ಹಾಕ್ಕಾಗದೆ ಉಳಿಯುವ ವ್ಯಥೆಯನ್ನ , ಈಗ ಇರುವ ಸ್ಥಿತಿಯನ್ನ , 2  ಆರೋಗ್ಯವು ಹಾಕ್ಕಾಗದೆ  ಉಳಿಯುವ ವ್ಯಥೆಯನ್ನ , ಈಗ ಇರುವ ಸ್ಥಿತಿಯನ್ನ ,


ಆಲ್ಮಾ ಆಟಾ ಘೋಷಣೆ ಹೇಳಿತು ಆರೋಗ್ಯ ಮಾನವ ಹಕ್ಕೆಂದು, 2

ನಮ್ಮ ಸರ್ಕಾರ ಸಹಿ ಹಾಕಿತು ಆರೂಗ್ಯ ಮಾನವ ಹಕ್ಕೆಂದು, 2

ಭಾರತ್ ಸರ್ಕಾರ ಒಪ್ಪಿಕೊಂಡಿತು ಆರೋಗ್ಯ ಮಾನವ ಹಕ್ಕೆಂದು, 2


ಕುಂತ ಜನಗಳೇ ನಿಂತ ಮನಗಳೇ, ಕೇಳಿರಿ ಕಥೆಯನ್ನ , ನಾವು ಹೇಳುವ ಕಥೆಯನ್ನ , ಆರೋಗ್ಯವು ಹಾಕ್ಕಾಗದೆ ಉಳಿಯುವ ವ್ಯಥೆಯನ್ನ , ಈಗ ಇರುವ ಸ್ಥಿತಿಯನ್ನ ,


ಖಾಸಿಗೆಯಲ್ಲಿ ಮಾನವ ಹಕ್ಕಿಗೆ ಜಾಗ ಎಲ್ಲಿಯಿದೆಯಣ್ಣ, 2

ಆರೋಗ್ಯವನ್ನು ಕೊಳ್ಳುಕೊಳ್ಳುವುದು ನಮ್ಮ ಸ್ಥಿತಿ ಯಣ್ಣ, 2

ದುಡ್ಡಿದ್ದವನಿಗೆ ಆರೋಗ್ಯ ಸಿಗುವುದು ಖಾಸಗಿಯಲ್ಲಣ್ಣ,2

ಆರೋಗ್ಯ ಇಂದು ಲಾಭ ನಷ್ಟದ ವ್ಯಾಪಾರವಣ್ಣ,

ಆರೋಗ್ಯ ಇಂದು ಲಾಭ ನಷ್ಟದ ವ್ಯಾಪಾರವಣ್ಣ, ಇದು ವ್ಯಾಪಾರವಣ್ಣ,


ಕುಂತ ಜನಗಳೇ ನಿಂತ ಮನಗಳೇ, ಕೇಳಿರಿ ಕಥೆಯನ್ನ , ನಾವು ಹೇಳುವ ಕಥೆಯನ್ನ , ಆರೋಗ್ಯವು  ಹಾಕ್ಕಾಗದೆ ಉಳಿಯುವ ವ್ಯಥೆಯನ್ನ ,  ಈಗ  ಇರುವ ಸ್ಥಿತಿಯನ್ನ , ಆರೋಗ್ಯವು ಹಾಕ್ಕಾಗದೆ ಉಳಿಯುವ ವ್ಯಥೆಯನ್ನ , ಈಗ ಇರುವ ಸ್ಥಿತಿಯನ್ನ


ಆರೋಗ್ಯವಿಂದು ವ್ಯಾಪಾರವಾಗಿದೆ! ಎಲ್ಲರ ಹಕ್ಕಾಗ ಬೇಕು ಅದು,

ಆರೋಗ್ಯ ಇಂದು ವ್ಯಾಪಾರವಾಗಿದೆ ಎಲ್ಲರ ಹಕ್ಕಾಗ ಬೇಕು ಅದು,  ಎಲ್ಲರ ಹಕ್ಕಾಗ ಬೇಕು ಅದು,

ಆರೋಗ್ಯ ಮಾನವ ಹಕ್ಕಾಗಬೇಕಾದರೆ ಸರ್ಕಾರಿ ವ್ಯವಸ್ಥೆ ಇರಬೇಕು, ನಮಗೆ ಸರ್ಕಾರಿ ವ್ಯವಸ್ಥೆ ಇರಬೇಕು, 2


ಕುಂತ ಜನಗಳೇ ನಿಂತ ಮನಗಳೇ, ಕೇಳಿರಿ ಕಥೆಯನ್ನ , ನಾವು ಹೇಳುವ ಕಥೆಯನ್ನ , ಆರೋಗ್ಯವು ಹಕ್ಕಾಗದೆ ಉಳಿಯುವ ವ್ಯಥೆಯನ್ನ , ಈಗ   ಇರುವ ಸ್ಥಿತಿಯನ್ನ , ಆರೋಗ್ಯವು ಹಕ್ಕಾಗದೆ ಉಳಿಯುವ ವ್ಯಥೆಯನ್ನ , ಈಗ  ಇರುವ ಸ್ಥಿತಿಯನ್ನ ,


ತಿಳಿಯಿತು ನಮಗಿಂದು, ನಮಗಿಂದು ತಿಳಿಯಿತು ಆರೋಗ್ಯವು ಮಾನವ  ಹಕ್ಕೆಂದು

ಸರ್ಕಾರಿ ಆರೋಗ್ಯ ವ್ಯವಸ್ಥೆ ಸರಿ ಪಡಿಸಿ ಪಡೆಯೋಣ ಆರೋಗ್ಯ ಹಕ್ಕನ್ನು,

ನಾವು ಪಡೆಯೋಣ ಆರೋಗ್ಯ  ಹಕ್ಕನ್ನು,

ನಾವು ಪಡೆಯೋಣ ಆರೋಗ್ಯ  ಹಕ್ಕನ್ನು,